ಮೈಸೂರೆಂಬ ಸುಂದರ ನಗರವನ್ನು ಅಂಗೈ ಮೇಲೆ ತರುವುದು, ನಿಮ್ಮ ಕಣ್ಣಳತೆಯಲ್ಲಿ ತಂದು ನಿಲ್ಲಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ. ಮೈಸೂರಿಗರು ಅಥವಾ ಮೈಸೂರನ್ನು ಪ್ರೀತಿಸುವ ಜನರಿಗಾಗಿ ನಾವಿದನ್ನು ರೂಪಿಸಿದ್ದೇವೆ. ಹೊಸ ಪ್ರಯತ್ನ ಅಲ್ಲದಿದ್ದರೂ ಸಮಗ್ರವಾಗಿ ಮೈಸೂರನ್ನು ಹಿಡಿದಿಡುವ ಕೆಲಸ ಈವರೆಗೆ ಆಗಿಲ್ಲ. ಸುದ್ದಿ, ವ್ಯಾಪಾರ- ವಹಿವಾಟಿನ ಮಾಹಿತಿ, ಗಣ್ಯಾತಿಗಣ್ಯರ ಸಾಹಸಗಾಥೆ, ಗ್ರಾಹಕರಿಗೆ ಸಿಗುವ ನೆರವು, ಸರ್ಕಾರ ಹಾಗೂ ಖಾಸಗಿ ಕಚೇರಿಗಳ ವಿವರ… ಹೀಗೆ ಒಂದೆರಡಲ್ಲ, ಹಲವಾರು ಮಾಹಿತಿಗಳನ್ನು ಒಂದೇ ಕಡೆ ಒದಗಿಸುವುದು ನಮ್ಮ ಉದ್ದೇಶ. ಎಲ್ಲ ರೀತಿಯ ಜನರಿಗೂ ಉಪಯೋಗವಾಗುವಂತೆ ಇದನ್ನು ಸೃಷ್ಟಿಸಲಾಗಿದೆ.
ಇದೊಂದು ಬಹುಮುಖಿ ಮಾಧ್ಯಮ. ನಮ್ಮ ಪ್ರಯತ್ನಕ್ಕೆ ನೀವೂ ಕೈಜೋಡಿಸಿದರೆ ಮಾತ್ರ ನಮ್ಮ ಶ್ರಮ ಸಾರ್ಥಕ. ನಿಮಗೆ ಗೊತ್ತಿರುವ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಅದು ಎಲ್ಲರಿಗೂ ಸಿಗುವಂತಾಗುತ್ತದೆ.
ಎಲ್ಲರೂ ಎಲ್ಲರಿಗಾಗಿ ಬದುಕುವ, ಬೆಳೆಯುವ ಸಣ್ಣ ಸಿದ್ದಾಂತದೊಂದಿಗೆ ಈ ನವ ಮಾಧ್ಯಮದ ಸೇವೆಯನ್ನು ಬಳಸಿಕೊಳ್ಳೋಣ…
ಧನ್ಯವಾದಗಳು